ಡಾ . ಮಮತ (ಕಾವ್ಯ ಬುದ್ಧ)-ನಾಚಿಕೆಯ ಮುಳ್ಳೇ,

ಕಾವ್ಯಸಂಗಾತಿ ನಾಚಿಕೆಯ ಮುಳ್ಳೇ ಡಾ . ಮಮತ (ಕಾವ್ಯ ಬುದ್ಧ) ಇಷ್ಟೊಂದು ಮುನಿಸೇಕೆ ನಾಚಿಕೆಯ ಮುಳ್ಳೇ,ಕೆಂಪು ಕೆನ್ನೆಗಳೆನಗೆ ಹೇಳಿದ್ದು ಸುಳ್ಳೇ? …. ಮುಚ್ಚು ಮರೆ ಇನ್ನೇತಕ್ಕೆ?ಕಣ್ಣ ಸನ್ನೆಗಳೇಕೆ?ಬಣ್ಣನೆಯ ಮನಸುಗಳು ಒಂದನೊಂದರಿತಿರಲುಕಣ್ಣಾ ಮುಚ್ಚಾಲೆಯೇತಕ್ಕೆ? ನಾಚಿಕೆ ಮುಳ್ಳೇ…. ತಿಳಿಯಬೇಕೇನಮ್ಮಂತರಂಗದ ಸುರಂಗದೊಳಗಡೆಯಲ್ಲೋ?ಅಡಗಿ ಕುಳಿತಿರುವ ಆ‌ ಆಯಾಮಗಳುಅರಿವಿಲ್ಲದಂತೊಳಗಿಂದ‌ ಮೇಲೆರಗಿ ನಾನು ನೀನೆಂಬರಿದ ಮರೆಸಲು ತಡವೇಕೆ?ತಡೆಯೇಕೆ? ಕರೆಯೋಲೆಯೇಕೆ? ನಾಚಿಕೆ‌ಮುಳ್ಳೇ….ಅಂಗಾಗ‌ಮರೆತಿರುವ ಕಣ್ಣು -ಕಿವಿಯೊಳಗೆ..ಗುಣದೊಳಗೆ..ಮನದೊಳಗೆ ಕಾಣದಂತಿರುವ ಅನಾಂಗಗಳುಲೋಹರಸ ರಜಸದಲಿ ಮುಗಿಲೆದ್ದಿತೇ ನಾಚಿಕೆ ಮುಳ್ಳೇ